ರುದ್ರ ತಾಂಡವ - ಇದು ಗುರು ದೇಶಪಾಂಡೆ ನಿರ್ದೇಶಿಸಿದ 2015 ರ ಕನ್ನಡ ಭಾಷೆಯ ಸಾಹಸ ಚಲನಚಿತ್ರವಾಗಿದೆ ಮತ್ತು ಇದು 2013 ರ ತಮಿಳು ಚಲನಚಿತ್ರ ಪಾಂಡಿಯ ನಾಡು ದ ರೀಮೇಕ್ ಆಗಿದೆ. ಇದರಲ್ಲಿ ಚಿರಂಜೀವಿ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪಿ. ರವಿಶಂಕರ್, ಗಿರೀಶ್ ಕಾರ್ನಾಡ್ ಮತ್ತು ಕೃಷ್ಣ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿ ಶಿವರಾಜ್ ತನ್ನ ಸಹೋದರನನ್ನು ಕೊಂದ ಸೇಡನ್ನು ಸ್ಥಳೀಯ ಮಾಫಿಯಾ ಮೇಲೆ ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದರ ಕುರಿತು ಚಿತ್ರವು ಕಥೆಯನ್ನು ಹೇಳುತ್ತದೆ. 27 ಫೆಬ್ರವರಿ 2015 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. == ಪಾತ್ರವರ್ಗ == ಶಿವರಾಜ್ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಜಾಹ್ನವಿಯಾಗಿ ರಾಧಿಕಾ ಕುಮಾರಸ್ವಾಮಿ ನರಸಿಂಹ ರೆಡ್ಡಿ ಪಾತ್ರದಲ್ಲಿ ಪಿ ರವಿಶಂಕರ್ ಶಿವರಾಜ್ ತಂದೆಯಾಗಿ ಗಿರೀಶ್ ಕಾರ್ನಾಡ್ ಕೃಷ್ಣ (ಡಾರ್ಲಿಂಗ್ ಕೃಷ್ಣ ಎಂದು ಮನ್ನಣೆ) ನಾಗರಾಜ್ ಪಾತ್ರದಲ್ಲಿ ಕುಮಾರ್ ಗೋವಿಂದ್ ಚಿಕ್ಕಣ್ಣ ಶ್ರುತಿ ರಾಜ್ ಜಗ್ಗನಾಗಿ ವಸಿಷ್ಠ ಎನ್.ಸಿಂಹ ಚಿತ್ರಾ ಶೆಣೈ ಮಾಲತಿ ಸರದೇಶಪಾಂಡೆ ಸುರೇಶ್ ಮಂಗಳೂರು ಲೋಹಿತಾಶ್ವ ರಾಕ್‌ಲೈನ್ ಸುಧಾಕರ್ == ಹಿನ್ನೆಲೆಸಂಗೀತ == . ಹರಿಕೃಷ್ಣ ಚಿತ್ರದ ಹಿನ್ನೆಲೆ ಸಂಗೀತವನ್ನು ಹಾಡುಗಳ ಸಾಹಿತ್ಯವನ್ನು ಧನಂಜಯ್ ಅಡಿಗ, ಪುನೀತ್ ಆರ್ಯ ಮತ್ತು ಕೆ. ಕಲ್ಯಾಣ್ ಬರೆದಿದ್ದಾರೆ . ಸೌಂಡ್‌ಟ್ರ್ಯಾಕ್ ಆಲ್ಬಂ ಐದು ಹಾಡುಗಳನ್ನು ಒಳಗೊಂಡಿದೆ ಮತ್ತು ಡಿ.ಇಮ್ಮಾನ್ ಸಂಯೋಜಿಸಿದ ತಮಿಳು ಚಲನಚಿತ್ರದ ಎಲ್ಲಾ ಹಾಡುಗಳನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ. "ಟ್ರೈ ಟ್ರೈ ಟ್ರೈ" ಟ್ರ್ಯಾಕ್ ಅನ್ನು ನಟಿ ರಮ್ಯಾ ನಂಬೀಸನ್ ಅವರು ಹಾಡಿ ಆ ಮೂಲಕ ಹಿನ್ನೆಲೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. "ಒಂದೂರಲ್ಲಿ ಒಬ್ಬ" ಹಾಡು ಅನ್ನು ನಟ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ, ಇತರ ಮೂರು ಹಾಡುಗಳನ್ನು ಶಂಕರ್ ಮಹದೇವನ್ (ಎರಡು) ಮತ್ತು ರಾಜೇಶ್ ಕೃಷ್ಣನ್ (ಒಂದು) ಹಾಡಿದ್ದಾರೆ. ಈ ಆಲ್ಬಂ ಅನ್ನು 2015 ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರುದ್ರ ತಾಂಡವ @ ಐ ಎಮ್ ಡಿ ಬಿ